ಪೂರ್ವ ಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಆಗುವ ಸಮಾಸಕ್ಕ್ಕೆ ದ್ವಿಗು ಸಮಾಸವೆಂದು ಹೆಸರು. ಎರಡು+ಕೆಲ=ಇಕ್ಕೆಲ (ಇರ್ಕೆಲ), ಮೂರು+ಮಡಿ=ಮುಮ್ಮಡಿ -ಇಕ್ಕೆಲ, ಮುಮ್ಮಡಿ ಇತ್ಯಾದಿ ಸಮಸ್ತಪದಗಳು ಪೂರ್ವದ ಪದವು ಸಂಖ್ಯಾವಾಚಕವಾಗಿ ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗಿವೆ. ದ್ವಿಗುಸಮಾಸವೆಂದರೆ ಪೂರ್ವಪದವು ಸಂಖ್ಯಾವಾಚಕವಾಗಿಯೇ ಇರಬೇಕು. (೭೯) ದ್ವಿಗುಸಮಾಸ:- ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು. (ಇದೂ ಕೂಡ ತತ್ಪುರುಷ ಸಮಾಸದ ಒಂದು ಭೇದವೇ ಎಂದು ಹೇಳುವರು.) ಎರಡು+ಕೆಲ=ಇಕ್ಕೆಲ ಮೂರು+ಮಡಿ=ಮುಮ್ಮಡಿ ಇಲ್ಲಿ, ಸಂಖ್ಯಾವಾಚಕವಾದ ಪೂರ್ವ ಪದವು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಸಮಸ್ತಪದವಾಗಿದೆ. ದ್ವಿಗು ಸಮಾಸದಲ್ಲಿ, ಪೂರ್ವ ಪದವು ಸಂಖ್ಯಾವಾಚಕವಾಗಿರಲೇ ಬೇಕು. ಕನ್ನಡ - ಕನ್ನಡ ಪದಗಳು ಒಂದು+ಕಟ್ಟು = ಒಗ್ಗಟ್ಟು ಎರಡು+ಮಡಿ = ಇಮ್ಮಡಿ ನಾಲ್ಕು+ಮಡಿ = ನಾಲ್ವಡಿ ಐದು+ಮಡಿ = ಐವಡಿ ಎರಡು+ಬಾಳ್ = ಇರ್ವಾಳ್ ಮೂರು+ಗಾವುದ = ಮೂಗಾವುದ ಒಂದು+ಕಣ್ಣು = ಒಕ್ಕಣ್ಣು ಸಂಸ್ಕೃತ - ಸಂಸ್ಕೃತ ಪದಗಳು ಪಂಚಗಳಾದ+ಇಂದ್ರಿಯಗಳು = ಪಂಚೇಂದ್ರಿಯಗಳು ಸಪ್ತಗಳಾದ+ ಅಂಗಗಳು = ಸಪ್ತಾಂಗಗಳು ದಶಗಳಾದ+ಮುಖಗಳು = ದಶಮುಖಗಳು ಅಷ್ಟಾದಶಗಳಾದ+ಪುರಾಣಗಳು = ಅಷ್ಟಾದಶಪುರಾಣಗಳು ಏಕವಾದ+ಅಂಗ = ಏಕಾಂಗ ಸಮಾಸ